ಒಂದೋ ಈ ಮೇಲಿನದರ ಮೋಹ ಆಸೆಯಿಂದಲೋ.... ಇಲ್ಲ ಇವರುಗಳ ಕಾಳಜಿ ಪ್ರೀತಿ ಪ್ರೇಮ ಶಕ್ತಿ ಭಕ್ತಿ ಕರುಣೆ ಬೇಡಿಕೆ ಹಾರೈಕೆ ಕರ್ತವ್ಯದ ಕಾರಣದಿಂದಲೋ ನಮ್ಮ ಇರುವು ಇನ್ನೂ ಇದೆ.....
ಆಗಿಹೋಗಬೇಕಾದ ಪಯಣ ಮುಂದೆ ಸಾಗುತ್ತಲೇ ಇರಬೇಕಾದ ನಿರ್ಬಂಧ.... ಇರುವಿನ ಅರಿವಾಗದೆ ಅಹಂಕಾರದ ಗೂಡಾಗುವ ಸಂಬಂಧ....
ನನ್ನ ಬಿಡಿ ಎಂದು ಕೇಳುವುದೋ ಬೇಡುವುದೋ ಅಂಗಲಾಚುವುದೋ ತಿಳಿಯದು ಏಕೆಂದರೆ ಅದೂ ಒಂದು ಬಯಕೆಯೇ
ಶವದಿಂದ ಶಿವನಾಗುವಾ ಶಬ್ದದಿಂದ ನಿಶ್ಯಬ್ದನಾಗುವಾ ಆಕಾರದಿಂದ ನಿರಾಕಾರನಾಗುವ ಎಲ್ಲಾ ಇಚ್ಛೆಗಳು ಮಾಡಿದಾತ ಆಡಿಸುವ ಯೋಚನೆ ಕೈಬಿಡುವ ಮುನ್ನ ಆಗದು
No comments:
Post a Comment