Tuesday, November 18, 2025

ಈಗಿನ ಕಾಲದಲ್ಲಿ ಬಂಧುಗಳು ಸಂತಾಪಕ್ಕೂ ಇಲ್ಲ

ಈಗಿನ ಕಾಲದಲ್ಲಿ ಬಂಧುಗಳು ಸಂತಾಪಕ್ಕೂ ಇಲ್ಲ ಸಂತೋಷಕ್ಕೂ ಇಲ್ಲ ಹಾಗಾಗಿದೆ ....ಬಂಧುಗಳಿಗೆ ಸೂತಕ ಇರಲು ಬಾಧೆ ಮಕ್ಕಳಿಗೆ ಮುಂಡನ ಮಾಡಿಸಿಕೊಳ್ಳಲು ಬಾಧೆ ತುಂಬಾ ಓದಿದ ಮಕ್ಕಳಿಗಂತೂ ತಂದೆ ತಾಯಿಯರೇ ಬಾಧೆ ಇರುವ ದಿನಗಳಲ್ಲಿ ಜೊತೆಗಿರಲು ಬಾಧೆ ಹೋದ ದಿನದಲ್ಲಿ ಆಸ್ಪತ್ರೆಯ ಮಾರ್ಚುರಿಯೇ ಗತಿಯಾಗಿದೆ 
ಮಕ್ಕಳ ಅಸಹನೆ ಎಲ್ಲಿಗೆ ಮುಟ್ಟಿದೆಯೆಂದರೆ ತಮ್ಮನ್ನು ದಡಮುಟ್ಟಿಸಿದ ಯಾರನ್ನೂ ಗೌರವದಿಂದ ಕಾಕಾಣುವುದಿಲ್ಲ... ದಡ ಸೇರಿದ ಮೇಲೆ ಅಂಬಿಗ ಏಕೆ ಎನ್ನುವಂತೆ ಆಗಿದೆ 
ಇದು ಮಕ್ಕಳ ಉಪೇಕ್ಷೆಯೋ ಅಥವಾ ಪೋಷಕರು ಮಾಡಿದ ತಪ್ಪು ಜೀವನಪಾಠವೋ 

No comments: