ನನ್ನ ಸಮೇತ ಮಾತಾ ಪಿತೃ ಒಡಹುಟ್ಟಿದವರು ಗುರು ಆಚಾರ್ಯ ಬಂಧು ಬಳಗ ಸ್ನೇಹಿತ ಪತ್ನಿ ಸುತ ಪತಿ ಪುತ್ರಿ ಐಶ್ವರ್ಯ ಅಂತಸ್ತು ಗೌರವ ವೈದ್ಯ ಇಚ್ಛೆ ಎಲ್ಲವೂ ಬಂಧನ......
ಒಂದೋ ಈ ಮೇಲಿನದರ ಮೋಹ ಆಸೆಯಿಂದಲೋ.... ಇಲ್ಲ ಇವರುಗಳ ಕಾಳಜಿ ಪ್ರೀತಿ ಪ್ರೇಮ ಶಕ್ತಿ ಭಕ್ತಿ ಕರುಣೆ ಬೇಡಿಕೆ ಹಾರೈಕೆ ಕರ್ತವ್ಯದ ಕಾರಣದಿಂದಲೋ ನಮ್ಮ ಇರುವು ಇನ್ನೂ ಇದೆ.....
ಆಗಿಹೋಗಬೇಕಾದ ಪಯಣ ಮುಂದೆ ಸಾಗುತ್ತಲೇ ಇರಬೇಕಾದ ನಿರ್ಬಂಧ.... ಇರುವಿನ ಅರಿವಾಗದೆ ಅಹಂಕಾರದ ಗೂಡಾಗುವ ಸಂಬಂಧ....
ನನ್ನ ಬಿಡಿ ಎಂದು ಕೇಳುವುದೋ ಬೇಡುವುದೋ ಅಂಗಲಾಚುವುದೋ ತಿಳಿಯದು ಏಕೆಂದರೆ ಅದೂ ಒಂದು ಬಯಕೆಯೇ
ಶವದಿಂದ ಶಿವನಾಗುವಾ ಶಬ್ದದಿಂದ ನಿಶ್ಯಬ್ದನಾಗುವಾ ಆಕಾರದಿಂದ ನಿರಾಕಾರನಾಗುವ ಎಲ್ಲಾ ಇಚ್ಛೆಗಳು ಮಾಡಿದಾತ ಆಡಿಸುವ ಯೋಚನೆ ಕೈಬಿಡುವ ಮುನ್ನ ಆಗದು